ಕೃಷ್ಣಾ ಮೇಲ್ದಂಡೆ ಯೋಜನೆ
ಕೃಷ್ಣಾ ಮೇಲ್ದಂಡೆ ಯೋಜನೆಯು ಕೃಷ್ಣಾ ನದಿಯ ಉದ್ದಗಲಕ್ಕೆ ಎರಡು ಆಣೆಕಟ್ಟುಗಳು ಮತ್ತು ಕಾಲುವೆಗಳ ಜಾಲ ಹೊಂದಿರುತ್ತದೆ. ಘಟಪ್ರಭಾ ನದಿ ಮತ್ತು ಕೃಷ್ಣಾ ನದಿಗಳ ಸಂಗಮದಿಂದ ಕೆಲವು ಕಿ.ಮಿ ಕೆಳದಿಕ್ಕಿನಲ್ಲಿ ಅಲಮಟ್ಟಿ ಜಲಾಶಯವು ಪ್ರಮುಖ ಶೇಖರಣೆ ಜಲಾಶಯವಾಗಿದೆ. ಮಲಪ್ರಭಾ ನದಿ ಮತ್ತು ಕೃಷ್ಣಾ ನದಿಗಳ ಸಂಗಮದಿಂದ ಕೆಲವು ಕಿ.ಮಿ ಕೆಳದಿಕ್ಕಿನಲ್ಲಿ ನಾರಾಯಣಪುರದಲ್ಲಿ ಸ್ಥಿತವಿರುವ ಕೆಳಭಾಗದ ಅಣೆಕಟ್ಟು, ನಾರಾಯಣಪುರ ಆಣೆಕಟ್ಟು, ದಿಕ್ಪರಿವರ್ತನಾ ಆಣೆಕಟ್ಟಾಗಿ ಕಾರ್ಯನಿರ್ವಹಿಸುವುದು. ಈ ಯೋಜನೆಯನ್ನು ವಿವಿಧ ಹಂತಗಳು ಮತ್ತು ಘಟಕಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಯೋಜನೆಯ ಹಂತ-1, 119 ಟಿಎಂಸಿ ನೀರನ್ನು ಉಪಯೋಗಿಸಿ 4,25,000 ಹೆಕ್ಟೇರುಗಳ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸಲು ಆಲೋಚಿಸಿದೆ ಹಾಗೂ ಹಂತ-2ರಲ್ಲಿ, 54 ಟಿಎಂಸಿ ನೀರನ್ನು ಬಳಸಿ 1,97,120 ಹೆಕ್ಟೇರುಗಳ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸಲು ಯೋಜಿಸಲಾಗಿದೆ. ಉತ್ತರ ಕರ್ನಾಟಕದ ಬರ ಪೀಡಿತ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳಾದ ಗುಲಬರ್ಗಾ, ಯಾದಗಿರ್, ರಾಯಚೂರು, ಬಿಜಾಪುರ ಮತ್ತು ಬಾಗಲಕೋಟೆ, ಈ ಸ್ಥಳಗಳಿಗೆ ಕೃಮೇಯೋ ಹಂತ 1 ಮತ್ತು 2ರ ಕೆಳಗೆ ಒಟ್ಟು 173 ಟಿಎಂಸಿ ನೀರಿನ ಬಳಕೆಯೊಂದಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ, ಕೃಮೇಯೋ ಹಂತ-1 ಮತ್ತು 2ರ ಯೋಜನೆ ಬಹಳಷ್ಟು ಪೂರ್ಣಗೊಂಡಿದ್ದು 6.08 ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.<
ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನವನ್ನು 30-12-2010ರಂದು ಆದೇಶ ಪ್ರಕಟಿಸಿತ್ತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ 65% ಹಂಚಿಕೆಯು ಈ ಕೆಳಗಿನಂತಿದೆ:
1 | ಮಹಾರಾಷ್ಟ್ರ | 81 ಟಿಎಮ್ಸಿ |
2 | ಕರ್ನಾಟಕ | 177 ಟಿಎಮ್ಸಿ |
3 | ಆಂಧ್ರ ಪ್ರದೇಶ | 190 ಟಿಎಮ್ಸಿ |
ಕೃಜವಿನ್ಯಾ-2, ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ 177 ಟಿಎಮ್ಸಿಯಲ್ಲಿ, 130.90 ಟಿಎಮ್ಸಿಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಹಂಚಿಕೆ ಮಾಡಿಲಾಗಿದೆ.
RIVER BASINS IN KARNATAKA


INDEX MAP OF SCHEME UKP STAGE – I & II


INDEX MAP OF SCHEME UKP STAGE – III

